BLOG FOLLOWERS

Monday, February 13, 2012

ಮಂಗಳೂರ್ ಬನ್ಸ್

   ಬೇಕಾಗುವ ಪದಾರ್ಥಗಳು 
  ಮೈದಾ ಹಿಟ್ಟು  - ಎರಡು ಉದ್ದ ಲೋಟ
  ಕಡ್ಲೆ ಹಿಟ್ಟು  -  ಎರಡು ದೊಡ್ಡ ಚಮಚ
 ಬಾಳೇಹಣ್ಣು  - ಚನ್ನಾಗಿ ಹಣ್ಣಾದ ಒಂದು ಪಚ್ಚೆ ಬಾಳೆ ಹಣ್ಣು
 ಸಕ್ಕರೆ ಪುಡಿ  -  ಎರಡು ಚಮಚ ಸಕ್ಕರೆ ಪುಡಿ
 ಉಪ್ಪು  - ಸ್ವಲ್ಪ
 ಮೊಸರು - ಒಂದು ಕಪ್ಪು
 ಕರಿಯಲು ಎಣ್ಣೆ.


ಮಾಡುವ ವಿಧಾನ:

 ಒಂದು ಅಗಲವಾದ ಪಾತ್ರೆಯಲ್ಲಿ{ಮರಿಗೆ} ಮೊಸರು ಉಪ್ಪು ಸಕ್ಕರೆ ಪುಡಿ ಹಾಕಿ ಬೆರಸಿಕೊಂಡು ,ಬಾಳೇ ಹಣ್ಣಿನ ಸಿಪ್ಪೆಯನ್ನು  ಸುಲಿದು  ಮಿಶ್ರಣದೊಳಗೆ ಹಾಕಿ ಚನ್ನಾಗಿ  ಹಿಸುಕಿ ಕೊಳ್ಳಬೇಕು.ಈಗ ಆ ಮಿಶ್ರಣಕ್ಕೆ
 ಮೈದಾ + ಕಡ್ಲೆ ಹಿಟ್ಟನ್ನು ಬೆರಸಿ  ಚನ್ನಾಗಿ ಕಲಿಸಿಕೊಂಡು , ಹಿಟ್ಟಿನ ಮುದ್ದೆಯನ್ನು ಮಾಡಿಕೊಳ್ಳಬೇಕು. ಬಳಿಕ ಎರಡು ಚಮಚ ಎಣ್ಣೆಯನ್ನು ಮೇಲಿನಿಂದ ಹಾಕಿ ಗಟ್ಟಿಯಾಗಿ ಮುಚ್ಚಿ ಎಂಟು ಗಂಟೆಗಳ ತೆಗೆದಿಡಬೇಕು. [ಕಲೆಸುವಾಗ ನೀರನ್ನು ಹಾಕಿಕೊಳ್ಳಬಾರದು] ನಂತರ ಹಿಟ್ಟಿನಿಂದ ಲಿಂಬೆ ಗಾತ್ರದ ಕಣಕಗಳ್ಳನ್ನು ತಯಾರಿಸಿ
ಸ್ವಲ್ಪ ದಪ್ಪವಾಗಿಯೇ ಲಟ್ಟಿಸಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಬೇಕು.

* ಹಿಟ್ಟು ಕಲಿಸ್ಕೊಂಡು ತಕ್ಷಣವೇ ಮಾಡುವುದಾದರೆ,  ಸ್ವಲ್ಪ ಅಡುಗೆ ಸೋಡವನ್ನು ಸೇರಿಸಿಕೊಳ್ಳಬೇಕು.

Friday, February 10, 2012

ಅಕ್ಕಿ ರೊಟ್ಟಿ

                                                            ಅಕ್ಕಿ  ರೊಟ್ಟಿ 
ಬೇಕಾಗುವ ಪದಾರ್ಥಗಳು:
ಮೃದುವಾದ  ಅನ್ನ - ಒಂದು ಕಪ್ಪು
ಅಕ್ಕಿ ಹಿಟ್ಟು  -  ಒಂದು ಕಪ್ಪು 
ಉಪ್ಪು - ಸ್ವಲ್ಪ.
ಮೈದಾ ಹಿಟ್ಟು  - ಸ್ವಲ್ಪ
ಮಾಡುವ ವಿಧಾನ:
೧. ಒಂದು ಅಗಲವಾದ ತಟ್ಟೆಯಲ್ಲಿ  ಅನ್ನ+ ಅಕ್ಕಿ ಹಿಟ್ಟು+ ಉಪ್ಪನ್ನು ಬೆರಸಿ ಮೃದುವಾಗಿ ಕಲಸಿ ಹಿಟ್ಟನ್ನು ತಯಾರಿಸಬೇಕು. [ ಬೇಕಾದಲ್ಲಿ ಮಿಕ್ಸಿ ಗೆ ಹಾಕಿಕೊಂಡು ಮಾಡಬಹುದು]
೨. ಕಲಿಸಿದ ಹಿಟ್ಟಿನಿಂದ ಹದ ಗಾತ್ರದ ಉಂಡೆಗಳನ್ನು ತಯಾರಿಸಬೇಕು.
೩. ಒಂದು ಪ್ಲಾಸ್ಟಿಕ್  ಹಾಳೆಯ  ಮೇಲೆ  ಸ್ವಲ್ಪ ಮೈದಾ ಹಿಟ್ಟನ್ನು  ಸಿಂಪಡಿಸಿ, ಉಂಡೆಯನ್ನು ಇಟ್ಟು ನಿಧಾನವಾಗಿ ಲಟ್ಟಿಸಿಕೊಂಡು,  ಬಿಸಿ   ಕಾವಲಿಯಾ ಮೇಲೆ ರೊಟ್ಟಿಯನ್ನು ಹಾಕಿ ಎರಡೂ ಬದಿಯನ್ನು ಬೇಯಿಸಿ
 [ಸುಡಬೇಕು] ತೆಗೆಯಬೇಕು. ಎಣ್ಣೆಯನ್ನು ಹಾಕಲ್ಲಿಕ್ಕೆ ಇಲ್ಲ.
 ೪. ಕೆಂಡದ ಓಲೆ ಇದ್ದಲ್ಲಿ  direct ಕೆಂಡದ ಮೇಲೆ  ರೊಟ್ಟಿಯನ್ನು ಸುಡಬಹುದು.


* ಬಿಸಿ ಬಿಸಿ  ರೊಟ್ಟಿಗೆ ತುಪ್ಪವನ್ನು ಹಾಕಿ, ಖಾರದ ಪಲ್ಯದೊಂದಿಗೆ ಸವಿಯಬೇಕು.
 

ಮಂಡಕ್ಕಿ ಉಂಡೆ/ ಲಡ್ಡು

                                                                    ಮಂಡಕ್ಕಿ  ಉಂಡೆ/ ಲಡ್ಡು 
ಬೇಕಾಗುವ ಪದಾರ್ಥಗಳು:
ಮಂಡಕ್ಕಿ/puffed rice - ಒಂದು ಸೇರು
ಬೆಲ್ಲ  - ಎರಡು ಸವತು ಬೆಲ್ಲದ ಪುಡಿ
ತುಪ್ಪ- ಎರಡು ದೊಡ್ಡ ಚಮಚ 
ಏಲಕ್ಕಿ ಪುಡಿ.
ಮಾಡುವ ವಿಧಾನ:
 ಒಂದು ದಪ್ಪ ತಳದ ಬಾಣಲೆಯಲ್ಲಿ, ಬೆಲ್ಲಕ್ಕೆ ಸ್ವಲ್ಪ ನೀರನ್ನು ಹಾಕಿ ಕಾಯಿಸಿ ಒಂದೆಳೆ ಪಾಕವನ್ನು ತಯಾರಿಸಬೇಕು.ಪಾಕವಾದ  ಕೂಡಲೇ ತುಪ್ಪವನ್ನು ಹಾಕಿಕೊಂಡು, ಉರಿಯನ್ನು ತೆಗೆದು ಬಿಡಬೇಕು ಹಾಗು 


ತಕ್ಷಣವೇ ಮಂಡಕ್ಕಿ ಏಲಕ್ಕಿಪುಡಿ   ಸೇರಿಸಿ ಮಿಶ್ರ ಮಾಡಿಕೊಳ್ಳಬೇಕು. ಕೂಡಲೇ ಕೈಗೆ ತುಪ್ಪವನ್ನು ಸವರಿ ಮಂಡಕ್ಕಿ ಮಿಶ್ರಣವನ್ನು ತೆಗೆದುಕೊಂಡು[ಬಿಸಿ ಇರುವಾಗಲೇ] ಉಂಡೆಯನ್ನು ಕಟ್ಟಿಕೊಳ್ಳಬೇಕು. ಉಂಡೆಗಳು ತಣಿದ ಬಳಿಕ ಗಾಳಿ ಆಡದ ಡಬ್ಬಿಯಲ್ಲಿ ತೆಗೆದಿಡಬೇಕು.



Wednesday, February 8, 2012

ಭೆಂಡಿ ಕುರ್ಕುರಿ

     

          ಭೆಂಡಿ   ಕುರ್ಕುರಿ    
ಎಳೇ ಬೆಂಡೆಕಾಯಿ --೩೦೦ ಗ್ರಾಂ
ಖಾರ ಪುಡಿ -- ಖಾರಕ್ಕೆ ತಕ್ಕಷ್ಟು                                                                                          ಚಾಟ್ ಮಸಾಲ ಪುಡಿ  - ಒಂದು ಚಮಚ  
ಚಿರೋಟಿ ರವೆ  - ಸ್ವಲ್ಪ 
ಕಡ್ಲೆ ಹಿಟ್ಟು  - ಸ್ವಲ್ಪ 
ಉಪ್ಪು - ರುಚಿಗೆ ತಕ್ಕಷ್ಟು 
ಕರಿಯಲು ಎಣ್ಣೆ. 

ಮಾಡುವ ವಿಧಾನ:
೧. ತೊಳೆದಿಟ್ಟ ಬೆಂಡೆಕಾಯಿಯ ತುದಿ =ತಲೆ ಭಾಗವನ್ನು ತುಂಡು ಮಾಡಿ, ತೆಳ್ಳಗೆ ಉದುದ್ದಕ್ಕೆ
     ಕತ್ತರಿಸಿಕೊಳ್ಳಬೇಕು.
೨.  ಕತ್ತರಿಸಿದ ಬೆಂಡೆಕಾಯಿ ಗೆ  ಉಪ್ಪು, ಖಾರ, ಚಾಟ್ ಮಸಾಲಪುಡಿ, ಚಿರೋಟಿ ರವೆ ಹಾಗು ಸ್ವಲ್ಪ      ಕಡ್ಲೆ ಹಿಟ್ಟನ್ನು ಹಾಕಿ ಚನ್ನಾಗಿ ಬೆರಸಿ ಸ್ವಲ್ಪ ಹೊತ್ತು ಬಿಡಬೇಕು. 
೩.   ಕಾದ ಎಣ್ಣೆಯಲ್ಲಿ, [ಮೀಡಿಯಂ ಉರಿಯಲ್ಲಿ] ಮಸಾಲೆ ಹಚ್ಚಿದ ಬೆಂಡೆ ಕಾಯಿ ಹೋಳುಗಳ್ಳನ್ನು
     ಕರಿದು ತೆಗೆದರೆ, ರುಚಿ ರುಚಿಯಾದ crispy ಬೆಂಡೆಕಾಯಿ ಕುರ್ಕುರಿ ಸವಿಯಬಹುದು.


೪. ಬಡಿಸುವಾಗ, ಕರಿದಿಟ್ಟ ಬೆಂಡೆಕಾಯಿಗೆ ಲಿಂಬೆ ರಸವನ್ನು ಹಿಂಡಿಕೊಳ್ಳಬೇಕು.

                                                                        

Sunday, February 5, 2012

ಬದನೇಕಾಯಿ ಪಲ್ಯ/ ವೈಂಗಣ ತಳಾಸಣ

ಬದನೇಕಾಯಿ  ಪಲ್ಯ/ ವೈಂಗಣ  ತಳಾಸಣ 
ಬೇಕಾಗುವ  ಪದಾರ್ಥಗಳು 
ಮೈಸೂರ್ ಬದನೆ ಅಥವ  ಯಾವುದೇ ಬದನೇಕಾಯಿ -  ೩೦೦ಗ್ರಾಂ 
ಹುಣಸೆ ರಸ -  ಎರಡು ದೊಡ್ಡ ಚಮಚ 
ಹಸಿಮೆಣಸು  -  ನಾಲ್ಕು 
ಬೆಲ್ಲ  - ಅರ್ದ ಚಮಚ 
ಬೆಳ್ಳುಳ್ಳಿ  -  ಎರಡು ಗಡ್ದೆ
ಎಣ್ಣೆ  - ಎರಡು ಚಮಚ 
ಉಪ್ಪು ರುಚಿಗೆ ಹಿಡಿಸುವಷ್ಟು.

ಮಾಡುವ  ವಿಧಾನ
೧. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಹಾಕಿ, ಜಜ್ಜಿದ ಬಳ್ಳಳ್ಳಿ ಸೀಳಿದ ಹಸಿಮೆಣಸು ಹಾಕಿ ಒಗ್ಗರಿಸಿಕೊಳ್ಳಬೇಕು.
೨. ಅದೇ ಒಗ್ಗರಣೆಯಲ್ಲಿ, ತುಂಡರಿಸಿದ ಬದನೆ ಯನ್ನು ಹಾಕಿ ಚನ್ನಾಗಿ ಹುರಿದುಕೊಂಡು ಸ್ವಲ್ಪ ನೀರನ್ನು ಹಾಕಿ ಬೇಯಲು ಬಿಡಬೇಕು.ಬದನೆ ಅರ್ದ ಬೆಂದ ಬಳಿಕ ಸ್ವಲ್ಪ ಉಪ್ಪು,ಬೆಲ್ಲ  ಹುಣಸೆ ರಸವನ್ನು ಹಾಕಿ  ಚನ್ನಾಗಿ ಬೇಯಿಸಿದರೆ ಬದನೆ ತಳಾಸಣ ರೆಡಿ.

ಅನ್ನ/ ಚಪಾತಿ ಯೊಂದಿಗೆ  ಈ ಪಲ್ಯ ಒಳ್ಳೆಯದಾಗುತ್ತದೆ.

ಬಸಳೆ ಸೊಪ್ಪಿನ ತಂಬುಳಿ

                                                                              ಬಸಳೆ ಸೊಪ್ಪಿನ ತಂಬುಳಿ 

ಬೇಕಾಗುವ ಪದಾರ್ಥಗಳು:
 ಒಂದು ಹಿಡಿ ತೊಳೆದಿಟ್ಟ ಬಸಳೆ ಸೊಪ್ಪು 
ಒಂದು ಕಪ್ಪು ಕಾಯಿತುರಿ
 ಎಂಟರಿಂದ ಹತ್ತು  ಕಾಳುಮೆಣಸು 
ಸಿಹಿ ಮೊಸರು  ಒಂದು ಕಪ್ಪು 
ಒಂದು ಚಮಚ ತುಪ್ಪ 
ಅರ್ದ ಚಮಚ ಜೀರಿಗೆ 
ಒಂದು ಒಣ ಮೆಣಸು 
ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

೧. ಬಾಣಲೆಯಲ್ಲಿ ಅರ್ದ ಚಮಚ ತುಪ್ಪವನ್ನು ಹಾಕಿ ಕಾಳುಮೆಣಸನ್ನು ಹುರಿದುಕೊಂಡು, ಅದರಲ್ಲಿಯೇ ಸೊಪ್ಪನ್ನು
ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ ತೆಗೆದಿಡಬೇಕು.
೨. ಹುರಿದ ಪದಾರ್ಥಗಳ್ಳನ್ನು  ಕಾಯಿತುರಿ + ಮೊಸರು ಹಾಕಿ  ರುಬ್ಬಿಕೊಳ್ಳಬೇಕು.
೩. ರುಬ್ಬಿದ ಮಿಶ್ರಣಕ್ಕೆ ಹದವಾಗಿ ಉಪ್ಪನ್ನು ಬೆರಸಿ, ತುಪ್ಪದಲ್ಲಿ ಹುರಿದ ಜೀರಿಗೆ ,ಒಣಮೆಣಸಿನ ಒಗ್ಗರಣೆಯನ್ನು

    ಹಾಕಿದರೆ, ರುಚಿಯಾದ ಸ್ವಾಧಿಷ್ಟವಾದ ಬಸಳೆ ಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ.

Wednesday, February 1, 2012

ಸಾತ್ವಿಕ್ ಪುಲಾವ್

                             ಸಾತ್ವಿಕ್  ಪುಲಾವ್ 
 ಬೇಕಾಗುವ ಪದಾರ್ಥಗಳು:
  ಪರಿಮಳದ ಅಕ್ಕಿ  -  ಒಂದು ಲೋಟ 
   ಮಿಶ್ರ ತರಕಾರಿ    -   ಒಂದು ಕಪ್ಪು  
   ಸ್ಟ್ರಾಬೆರಿ ಹಣ್ಣು   -   ನಾಲ್ಕು  
   ಹಸಿ ದ್ರಾಕ್ಷಿ ಹಣ್ಣು   - ಹತ್ತು  
   ಹಸಿಮೆಣಸು  -   ನಾಲ್ಕು 
  ಕಾಳುಮೆಣಸು  -  ಐದು- ಆರು 
  ಚಕ್ಕೆ    -   ಒಂದು ತುಂಡು 
  ಲವಂಗ  -  ನಾಲ್ಕು 
  ಏಲಕ್ಕಿ   -  ಎರಡು
  ಅರಿಶಿನ  -  ಕಾಲು ಚಮಚ/ ಹಾಲಿನಲ್ಲಿ ಬೆರಸಿದ ಕೇಸರಿ 
  ತುಪ್ಪ   -   ಮೂರು ಚಮಚ 
  ಉಪ್ಪು  -  ರುಚಿಗೆ ತಕ್ಕಷ್ಟು 
  ಕೊತ್ತಂಬರಿ ಸೊಪ್ಪು  -  ಸ್ವಲ್ಪ.

ಮಾಡುವ ವಿಧಾನ:
   ದಪ್ಪ ತಳದ ಬಾಣಲೆಯಲ್ಲಿ , ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಚಕ್ಕೆ ಲವಂಗ ಏಲಕ್ಕಿ ದಾಲ್ಚಿನಿ ಎಲೆಯನ್ನು ಬಾಡಿಸಿಕೊಳ್ಳಬೇಕು. ಅದರಲ್ಲಿ ಹಸಿಮೆಣಸು, ಹೆಚ್ಚಿದ  ತರಕಾರಿ + ತೊಳೆದಿಟ್ಟ ಅಕ್ಕಿ ಯನ್ನು ಹಾಕಿ ಚನ್ನಾಗಿ ಬೆರಸಿಕೊಳ್ಳಬೇಕು.
 ನಂತರ ಎರಡು ಲೋಟ ನೀರು ಹಾಗು ಅರಿಶಿನ/ಹಾಲಿನಲ್ಲಿ ಬೆರಸಿದ ಕೇಸರಿ, ಉಪ್ಪನ್ನು ಹಾಕಿ, ಒಂದು ಕುದಿ ತೆಗೆದು, ಬಳಿಕ ಮುಚ್ಚಳವನ್ನು ಹಾಕಿ, ಸಣ್ಣ ಉರಿಯಲ್ಲಿ 


 ಹತ್ತರಿಂದ  ಹದಿನೈದು ನಿಮಿಷ ಬೇಯಿಸಿದರೆ  ಪಲಾವ್ ರೆಡಿ.
*ಪಲಾವ್ ರೆಡಿ ಆದ ಬಳಿಕ, ದ್ರಾಕ್ಷಿ + ಕತ್ತರಿಸಿದ ಸ್ಟ್ರಾಬೆರಿ + ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿಕೊಳ್ಳಬೇಕು.
* ಬಡಿಸುವಾಗ ಲಿಂಬೆ ರಸವನ್ನು ಹಾಕಿಕೊಳ್ಳಬಹುದು. 
* ಪಲಾವ್ ಜೊತೆಗೆ ಮೊಸರು ಒಳ್ಳೆಯದಾಗುತ್ತದೆ.