BLOG FOLLOWERS

Thursday, November 29, 2012

ಟೋಮಾಟೋ ಪಲ್ಯ

ಟೋಮಾಟೋ  ಪಲ್ಯ 

  ಬೇಕಾಗುವ ಪದಾರ್ಥಗಳು:
ಟೊಮ್ಯಾಟೋ ಹಣ್ಣು / ಕಾಯಿ    -  ಎಂಟು
ಈರುಳ್ಳಿ      -    ನಾಲ್ಕು
ಸಾಸಿವೆ   -   ಅರ್ದ  ಚಮಚ
ಉದ್ದಿನಬೇಳೆ  - ಅರ್ದ ಚಮಚ
ಕಡಲೆಬೇಳೆ   - ಅರ್ದ ಚಮಚ
ಕರಿಬೇವು  - ಒಂದು ಗರಿ
 ಎಣ್ಣೆ     -  ಒಂದು ದೊಡ್ಡ ಚಮಚ
 ಬೆಲ್ಲ   -  ಅರ್ದ ಚಮಚ
 ಅರಿಶಿನ ಪುಡಿ  - ಚಿಟಿಕೆಯಷ್ಟು
ಸಾಂಬಾರ್ ಪುಡಿ/ ಸಾರಿನ ಪುಡಿ  -  ಒಂದು ಚಮಚ
ಕಾಯಿತುರಿ  - ಸ್ವಲ್ಪ 
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
 ೧. ಮೊದಲು ಟೊಮ್ಯಾಟೋ  ಹಾಗು ಈರುಳ್ಳಿಯನ್ನು ಚನ್ನಾಗಿ  ತೊಳೆದುಕೊಂಡು, ಉದುದ್ದಕ್ಕೆ /ಚವ್ಕವಾಗಿ   ಹೆಚ್ಚಿಟ್ಟುಕೊಳ್ಳಬೇಕು.
 ೨. ಒಂದು ದಪ್ಪ ತಳದ ಬಾಣಲೆಯಲ್ಲಿ, ಒಂದು ದೊಡ್ಡ ಚಮಚದಷ್ಟು ಎಣ್ಣೆ ಯನ್ನು ಹಾಕಿ ಕಾಯಿಸಬೇಕು.
 ೩. ಎಣ್ಣೆ ಕಾದ ಬಳಿಕ, ಸಾಸಿವೆ ಹಾಕಿ ಸಿಡಿಸಬೇಕು, ನಂತರ ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಚಿಟಿಕೆ ಅರಿಶಿನ  ಹಾಕಿ
     ಒಗ್ಗರಣೆ ಮಾಡಿಕೊಳ್ಳಬೇಕು.
 ೪. ಈಗ  ಅದೇ ಒಗ್ಗರಣೆಯಲ್ಲಿ ಹೆಚ್ಚಿಟ್ಟ  ಈರುಳ್ಳಿ, ಟೊಮೇಟೊ  ತುಂಡು ಗಳ್ಳನ್ನು ಹಾಕಿ, ಸಾಂಬಾರ್/ಸಾರಿನ ಪುಡಿ
       ಬೆಲ್ಲದ ತುಂಡು ಹಾಗು  ಉಪ್ಪನ್ನು ಹಾಕಿ ಸರಿಯಾಗಿ ಬೆರಸಿ, ಮುಚ್ಚಳವನ್ನು ಮುಚ್ಚಿ ಒಂದು ಹತ್ತು ನಿಮಿಷ
      ಬೇಯಿಸಿದರೆ, ಟೋಮಾಟೊ ಪಲ್ಯ ಸಿದ್ದವಾಗುತ್ತದೆ.
೫. ಮೇಲಿನಿಂದ ಕಾಯಿತುರಿ ಹಾಕಿಕೊಳ್ಳ ಬೇಕು.



* ಧಿಡೀರ್ರಾಗಿ  ತಯಾರಿಸಬಹುದಾದ  ಈ ಪಲ್ಯವೂ ರೊಟ್ಟಿ/ ಚಪಾತಿ/ಪೂರಿಯೋಟ್ಟಿಗೆ  ತಿನ್ನಲು ಬಲು ರುಚಿಯಗುತ್ತದೆ.


  

Wednesday, November 7, 2012

 ಅಲಸಂದೆ ಕಾಳು  ದೋಸೆ 













ಬೇಕಾಗುವ ಪದಾರ್ಥಗಳು :

ದೋಸೆ ಅಕ್ಕಿ  -   ಒಂದು ಪಾವು 
ಅಲಸಂದೆ ಬೀಜ  -  ಅರ್ದ ಪಾವು 
ಅವಲಕ್ಕಿ    -  ಒಂದು ಹಿಡಿ
ಕಾಯಿತುರಿ   -  ಎರಡು ದೊಡ್ಡ ಚಮಚ 
ಉಪ್ಪು  -  ಸ್ವಲ್ಪ.
                    ದೋಸೆ ಹಿಟ್ಟು 

ಮಾಡುವ ವಿಧಾನ:
   ಅಕ್ಕಿ  ಮತ್ತು  ಅಲಸಂದೆ ಬೀಜವನ್ನು ಬೇರೆ -ಬೇರೆಯಾಗಿ  ನೆನಸಿಡಬೇಕು. [ಅಲಸಂದೆ ಬೀಜ ಚನ್ನಾಗಿ ನೆನದಿರಬೇಕು]
   ಮೊದಲಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು, ಅದರಲ್ಲಿಯೇ ಚನ್ನಾಗಿ ನೆನೆದ ಅಲಸಂದೆ ಬೀಜವನ್ನು ಹಾಕಿ
   ರುಬ್ಬಿಕೊಳ್ಳಬೇಕು.ಕೊನೆಯಲ್ಲಿ ನೆನಸಿದ  ಅವಲಕ್ಕಿ, ಕಾಯಿತುರಿ ಹಾಗು ಉಪ್ಪನ್ನು ಸೇರಿಸಿ ಚನ್ನಾಗಿ   ರುಬ್ಬಿಕೊಂಡರೆ ದೋಸೆ 
   ಹಿಟ್ಟು ತಯಾರಾಗುತ್ತದೆ.
     ಒಲೆಯ ಮೇಲೆ ದೋಸೆ ಹೆಂಚನ್ನು ಇಟ್ಟು ಬಿಸಿ ಮಾಡಿಕೊಂಡು, ಒಂದು ಚಮಚ ಎಣ್ಣೆ ಸವರಿ, ಒಂದು ಸವ್ಟು ಹಿಟ್ಟನ್ನು 
     ಹಾಕಿ, ನಿಧಾನವಾಗಿ ಹರಡಿಕೊಂಡು ಮುಚ್ಚಳ ಮುಚ್ಚಿ ಬೇಯಿಸಬೇಕು. ಹೀಗೆ ಎರಡು ಬದಿಯನ್ನು ಬೇಯಿಸಿದರೆ ದೋಸೆ 
     ಸಿದ್ದವಾಗುತ್ತದೆ. ಕಾಯಿ ಚಟ್ನಿ ಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ .
    [ ಅಲಸಂದೆ ಕಾಳಿನಲ್ಲಿ  ಪ್ರೋಟಿನ್ ಅಂಶ ಅಧಿಕವಾಗಿರುತ್ತದೆ. ದೋಸೆ/ಇಡ್ಲಿ/ಪಡ್ದು ಈ ರೀತಿ ಮಾಡಿ ತಿನ್ನುವದರಿಂದ 
      ಜೀರ್ಣವು ಸುಲಭವಾಗಿ ಆಗುತ್ತದೆ.]









minchu:-  ಜೀವನವು ಗೊತ್ತು ಗುರಿ ಇಲ್ಲದ ಪಯಣವಿದ್ದಂತೆ. ಮುಂದಿನ ಕ್ಷಣ ಏನಾಗುವುದೆಂದು ಯಾರಿಗೂ ತಿಳಿದಿರುವುದ್ದಿಲ್ಲ . ಹಾಗಾಗಿ ಬದುಕಿನ ಪ್ರತೀ ಕ್ಷಣವೂ ಅಮೂಲ್ಯವೆಂದು ತಿಳಿದು ಜೀವಿಸಬೇಕು.



Monday, November 5, 2012




Dal fry/ದಾಲ್ ಫ್ರೈ 


 Ingredients:
1/4 cup - moong dal/ಹೆಸ್ರು ಬೇಳೆ
1/4 cup - channa dal/ಕಡ್ಲೆ ಬೇಳೆ
1/4 cup - tur dal / ತೋಗ್ರಿ ಬೇಳೆ
2 - small onion /ಈರುಳ್ಳಿ
1 - large tomato/ಟೊಮೇಟೊ
1 tsp each - chopped ginger and garlic/ಹಸಿ ಶುಂಟಿ-ಬೆಳ್ಳುಳ್ಳಿ ಪೇಸ್ಟ್
1/4 tsp each - mustard seeds and methi seeds/ಸಾಸಿವೆ, ಮೆಂತ್ಯೆ ಕಾಳು
Garam masala, chilli powder and salt to taste/ಗರಂ ಮಸಾಲೆ ಪುಡಿ, ಖಾರ ಪುಡಿ,ಉಪ್ಪು
4 tsp ghee/ ತುಪ್ಪ.


 Method
  1. Wash the dal and soak for 15 mins.
  2. Half cook the dals in a pressure cooker.
  3. Heat 3 tsp ghee in a pan, add onions, then tomatoes and cook.
  4. Once they are cooked, add garam masala, chilli powder and salt.
  5. Open the pressure cooker, add the cooked tomato and onion mixture and let the dal boil for 10 to 15 min on a low flame.
  6. Heat one tsp ghee, add mustard and methi seeds and saute and then add chopped ginger and garlic and saute.
  7. Then add chopped coriander leaves.
  8. Add this mixture to the dal just before serving and boil for 5 mins.
  9. Garnish with coriander leaves.
  10. Serve with roti, naan  paratha or rice.



Saturday, November 3, 2012

ಗೋದಿ ನುಚ್ಚು ಉಪ್ಪಿಟ್ಟು / broken wheat upma

ಗೋದಿ ನುಚ್ಚು ಉಪ್ಪಿಟ್ಟು / broken wheat upma

ingredients:

ಗೋದಿ  ನುಚ್ಚು  -  ಒಂದು ಅಳತೆ [ಒಂದು  -ಲೋಟ ]          
ನೀರು   -     ಮೂರು ಅಳತೆ 
ಮಿಶ್ರ ತರಕಾರಿ ತುಂಡುಗಳು  - ಸ್ವಲ್ಪ 
ಹಸಿಮೆಣಸು  -  ಎರಡರಿಂದ ಮೂರು 
ಉಪ್ಪು   - ರುಚಿಗೆ ತಕ್ಕಷ್ಟು 
ಕಾಯಿ ತುರಿ  - ಸ್ವಲ್ಪ 
ಕೊತ್ತಂಬರಿ ಸೊಪ್ಪು - ಸ್ವಲ್ಪ 
ಲಿಂಬೆ ರಸ  -ಒಂದು ಚಮಚ 
ಒಗ್ಗರಣೆಗೆ :  
ಎಣ್ಣೆ     -  ಎರಡು ಚಮಚ 
ಸಾಸಿವೆ  - ಅರ್ದ ಚಮಚ 
ಉದ್ದಿನ ಬೇಳೆ  -  ಅರ್ದ ಚಮಚ 
ಕರಿಬೇವು  - ಒಂದು 
 ಸಣ್ಣಗೆ  ಹೆಚ್ಚಿದ ಈರುಳ್ಳಿ  - ಒಂದು.






 ಮಾಡುವ ವಿಧಾನ :
   1. ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. 
   2. ಎಣ್ಣೆ ಬಿಸಿಯಾದ ಕೂಡಲೇ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ , ಹಸಿಮೆಣಸು, ಕರಿಬೇವು, 
       ಹೆಚ್ಚಿಟ್ಟ  ಈರುಳ್ಳಿ ಹಾಕಿ ಚನ್ನಾಗಿ ಬಾಡಿಸಿಕೊಳ್ಳಬೇಕು.
   3. ಅದರಲ್ಲಿ ತರಕಾರಿ ಹೊಳುಗಳ್ಳ ನ್ನು ಹಾಕಿ ಕೊಂಡು, ನೀರನ್ನು ಹಾಕಿ, ಕುದಿ ಯಲು ಬೀಡಬೇಕು.
  4.  ನೀರಿಗೆ ಕುದಿ  ಬರುವಾಗ , ಗೋದಿ ನುಚ್ಚು , ಉಪ್ಪು  ಹಾಕಿ ಚನ್ನಾಗಿ ಬೆರಸಿ,ಮುಚ್ಚಳ ಮುಚ್ಚಿ  ಸಣ್ಣ ಉರಿಯಲ್ಲಿ ಸುಮಾರು 
       ಹತ್ತು /ಹದಿನೈದು ನಿಮಿಷ ಬೇಯಿಸಿದರೆ  ಗೋದಿ ನುಚ್ಚಿನ ಉಪ್ಪಿಟ್ಟು ಸಿದ್ದ ವಾಗುತ್ತದೆ.
  5. ಉರಿ ತೆಗೆದು ಬಾಣಲೆ ಕೆಳಗೆ ಇಟ್ಟ  ಬಳಿಕ , ಲಿಂಬೆ ರಸ- ಕಾಯಿತುರಿ ಹಾಕಿ ಬೆರಸಿ ಮೇಲಿನಿಂದ ಕೊತ್ತಂಬರಿ 
      ಸೊಪ್ಪನ್ನು ಹಾಕಿ ಅಲಂಕರಿಸಿದರೆ ಆರೋಗ್ಯಕರವಾದ / ರುಚಿ-ರುಚಿಯಾದ ಗೋದಿ ನುಚ್ಚಿನ ಉಪ್ಪಿಟ್ಟು ready to eat.