ಕೊತ್ತಂಬರಿ ಬೀಜದ ತಂಬುಳಿ
ಬೇಕಾಗುವ ಪದಾರ್ಥಗಳು:
ಕಾಯಿ ತುರಿ - ಅರ್ದ ಕಪ್ಪು
ಮೊಸರು - ಒಂದೂವರೆ ಕಪ್ಪು
ಕೊತ್ತಂಬರಿ ಬೀಜ/ ಧನಿಯಾ - ಎರಡು ಚಮಚ
ತುಪ್ಪ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆ ಗೆ ಬೇಕಾಗುವ ಪದಾರ್ಥಗಳು:
ತುಪ್ಪ - ಅರ್ದ ಚಮಚಒಣಮೆಣಸು - ಒಂದು/ ಎರಡು
ಕರಿಬೇವು - ಒಂದು ಗರಿ
ಮಾಡುವ ವಿಧಾನ:
೧. ಒಗ್ಗರೆಣೆ ಸವಟಿ ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿಮಾಡಿಕೊಂಡು ,ಕೊತ್ತಂಬರಿ ಬೀಜವನ್ನು ಹದವಾಗಿ ಹುರಿದುಕೊಳ್ಳಬೇಕು.೨. ಹುರಿದ ಕೊತ್ತಂಬರಿ ಕಾಳನ್ನು , ಕಾಯಿತುರಿ + ಮೊಸರನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಬೇಕು.
೩. ರುಬ್ಬಿದ ಮಿಶ್ರಣಕ್ಕೆ ತಕ್ಕಷ್ಟು ಉಪ್ಪನ್ನು ಬೆರಸಿ , ತುಪ್ಪ ಕಾಯಿಸಿ, ಸಾಸಿವೆ ಒಣಮೆಣಸು ಹಾಗು ಕರಿಬೀವಿನಿಂದ
ಒಗ್ಗರೆಣೆ ಹಾಕಿದರೆ, ರುಚಿಯಾದ ಆರೋಗ್ಯಕ್ಕೂ ಹಿತವಾದ ತಂಬುಳಿ ಸಿದ್ದ.
* ಇದೇ ವಿಧಾನದಲ್ಲಿ ಮೆಂತ್ಯೆ ಕಾಳು , ಜೀರಿಗೆ ಯನ್ನು ಹದವಾಗಿ ಹುರಿದು ಕಾಯಿತುರಿ ಮೊಸರನ್ನು ಬೆರಸಿ ರುಬ್ಬಿಕೊಂಡು ತಂಬುಳಿ ಯನ್ನು ಮಾಡಬಹುದು.